ಬಿಗ್ ಬಾಸ್ 2ನೇ ಆವೃತ್ತಿಗೆ ಸುದೀಪ್ ಇಲ್ಲ!
ಕನ್ನಡ ಬಿಗ್ ಬಾಸ್ ಮೊದಲ ಆವೃತ್ತಿಯ ಯಶಸ್ಸಿನಲ್ಲಿ ನಿರೂಪಕನಾಗಿ ಜನರ ಮನ್ನಣೆಗಳಿಸಿರುವ ನಟ 'ಕಿಚ್ಚ' ಸುದೀಪ್ ಅವರ ಪಾತ್ರವನ್ನು ಯಾರೂ ಅಲ್ಲಗಳೆಯುವುದಿಲ್ಲ. ಸುದೀಪ್ ಅವರ ನಿರೂಪಣೆ ಇದ್ದಿದ್ದರಿಂದಲೇ ಬಿಗ್ ಬಾಸ್ ಈ ಪರಿಯ ಜನಪ್ರಿಯತೆ ಗಳಿಸಿದೆ ಅನ್ನುವವರೂ ಇದ್ದಾರೆ. ನಮ್ಮ ಓದುಗರಂತೂ ನಿರೂಪಕರಲ್ಲಿ ಸುದೀಪ್ ಅವರೇ ಬೆಸ್ಟ್ ಎಂದು ಕೂಡ ತೀರ್ಪು ನೀಡಿದ್ದಾರೆ. ಬಿಗ್ ಬಾಸ್ ಮತ್ತು ಸುದೀಪ್ ಬಗ್ಗೆ ಅಭಿಪ್ರಾಯ ಹೀಗಿರುವಾಗ ಸುದೀಪ್ ತಮ್ಮ ಅಭಿಮಾನಿಗಳಿಗೆ, ಬಿಗ್ ಬಾಸ್ ನಿರ್ಮಾತೃಗಳಿಗೆ ಒಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ, ಬಿಗ್ ಬಾಸ್ ಮುಂದಿನ ಆವೃತ್ತಿಯಲ್ಲಿ ಅವರು ನಿರೂಪಣೆ ಮಾಡುವುದಿಲ್ಲ ಎಂದು. ಈ ಆಘಾತಕಾರಿ ಸಂಗತಿಯನ್ನು ಸುದೀಪ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದು, ಇನ್ನು ಮುಂದೆ ಸಿನೆಮಾಗಳಲ್ಲಿ ಹೆಚ್ಚು ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ. ಈ ವಿಷಯ ಕೇಳಿ ಅವರ ಟ್ವಿಟ್ಟರ್ ಸ್ನೇಹಿತರು ತಮ್ಮ ಅಸಮಾಧಾನ ಮತ್ತು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ತೀರ್ಮಾನ ಬದಲಾಯಿಸಲು ಒಪ್ಪದ ಸುದೀಪ್, "ಸಿನೆಮಾ ಮೂಲಕವೇ ನಾನು ಸಹಸ್ರಾರು ಅಭಿಮಾನಿಗಳ ಹೃದಯ ಗೆದ್ದಿದ್ದೇನೆ. ಅದನ್ನೇ ಮುಂದುವರಿಸಲು ಇಚ್ಛಿಸುತ್ತೇನೆ. ಮುಂದಿನ ಆವೃತ್ತಿ ನಡೆಸಿಕೊಡುವವರು ಬಿಗ್ ಬಾಸ್‌ಗೆ ಇನ್ನೂ ಹೆಚ್ಚಿನ ನ್ಯಾಯ ಒದಗಿಸಿಕೊಡುತ್ತಾರೆ ಎಂಬ ನಂಬಿಕೆಯಿದೆ" ಎಂದು ಟ್ವೀಟಿಸಿದ್ದಾರೆ. [ಸುದೀಪ್ ಸ್ಥಾನ ತುಂಬುವವರು ಯಾರು?]

No comments:
Post a Comment